ಶನಿವಾರ, ಫೆಬ್ರವರಿ 20, 2010

ಭಾವ ಯಾನ..

ಭಾವ ಲೋಕದ
ಕದವ ತಟ್ಟಿ
ಬಂದಳು
ಒಳಗೆ
ರಚ್ಚೆ
ಮನಕೆ
ತಂಪನೆರೆದು
ನಡೆದಳು
ಹೊರಗೆ...

      ---ಮಹಾಂತೇಶ ದೊಡ್ಡಮನಿ

ಮುಂಜಾವು..

ಮುಂಜಾವಿನ
ಎಳೆ ಬಿಸಿಲು
ಮೂಡಣದಿ ಜಾರಿ
ಕೆಂಪೆರಿದಾವು
ಸಕಲೆಂಟು ಮಾರಿ
ಹೂವ ಎಲೆಗಳ ಮೇಲೆ
ಮುತ್ತನಿಟ್ಟವರಾರು?
ಗಾಳಿ ಧೂಳಿಯೊಳಗೆ
ಗಂಧ ಬೆರೆಸಿದವರಾರು?


   ---ಮಹಾಂತೇಶ ದೊಡ್ಡಮನಿ

ಮರೆಯದಿರು...

ಕಣ್ಣ ಹನಿ
ಜಾರಿ
ಕರಗುವ ಮುನ್ನ
ನೆನಪುಗಳು ಮಾಸಿ
ಮರೆಯಾಗುವ ಮುನ್ನ
ಒಮ್ಮೆಯಾದರು
ನೆನೆಸು
ನಿನ್ನ
ಪ್ರೇಮಿಸುವವನನ್ನ...

  ---ಮಹಾಂತೇಶ ದೊಡ್ಡಮನಿ

ಚುಕ್ಕೆ

ಮನದ
ಮೊಗಸಾಲೆಯಲ್ಲಿ
ಅವಳ
ನೆನಪುಗಳ
ಕಲೆಗಳು...

  ---ಮಹಾಂತೇಶ ದೊಡ್ಡಮನಿ

ಅಭಿಸಾರಿಕೆ

ಅಭಿಸಾರಕೆ
ಬರಲೊಪ್ಪಳು
ಒಣ ಪ್ರೀತಿಯ
ಬರಿ ತೋರ್ಪಳು
ಮನ ಅರಳಿಸಿ
ತನು ಕೆರಳಿಸಿ
ಹೊರ ನಡೆದಳು
ಮನ ನೋಯಿಸಿ...

   ---ಮಹಾಂತೇಶ ದೊಡ್ಡಮನಿ

ಅರ್ಪಿಸುವೆ..

ನಿನ್ನ
ನೆನಪಾಗಿದೆ
ಕಣ್ಣು
ಹನಿಗೂಡಿದೆ
ಮನಸಿನಲಿ
ನಿನ್ನದೇ
ರೂಪ
ಒಡಮೂಡಿದೆ
ನಡೆದೆ ನೀ
ದೂರಕೆ
ಹೇಳದೆ ಕೇಳದೆ...

   ---ಮಹಾಂತೇಶ ದೊಡ್ಡಮನಿ

ಖಾಲಿ ಕಾಗದ

ನನ್ನ
ಮನದ
ಖಾಲಿ
ಕಾಗದದ
ಮೇಲೆ
ಯರ್ರಾ ಬಿರ್ರಿ
ಗೀಚಿದೆ
ಪ್ರೇಮವೆಂಬೆರೆಡಕ್ಷರಗಳ....!

   ---ಮಹಾಂತೇಶ ದೊಡ್ಡಮನಿ

ಹಾಗೇ ಸುಮ್ಮನೇ...

ಹಾಗೇ ಸುಮ್ಮನೇ
ಕಲ್ಲಾಗುವೆ
ನಿನ್ನ
ನೆನಪುಗಳ
ಬದಿಗಿರಿಸಿ....

   ---ಮಹಾಂತೇಶ ದೊಡ್ಡಮನಿ

ತಿಲಕ

ಹಕ್ಕಿಯಂತೆ
ನನಗೂ
ರೆಕ್ಕೆ
ಇದ್ದಿದ್ದರೆ

ಸೂರ್ಯ ಚಂದ್ರರೇ
ನಿನಗೆ
ತಿಲಕವಾಗಿರುತ್ತಿದ್ದರು...

   ---ಮಹಾಂತೇಶ ದೊಡ್ಡಮನಿ

ಭಾವ ವಿಯೋಗ

ಬರಿದಾದ ಮನ ಬೆಳಗೆ,
ನೀನೆಂದು ಬರುವೆ?
ಬರುವಂತೆ ಕಾಣುತ್ತಿಲ್ಲ
ಮರೆವೇನು ನಿನಗೆ
ಮನ ತುಂಬ ನೀನೆ
ಜಿನುಗುಡುವ ಸೋನೆ
ಮೊದಲೆಲ್ಲ ಜೊತೆಗೂಡಿ
ಪಿಸು ಮಾತು ಒಡಮೂಡಿ
ಗುಂಯ್ ಗುಡುವ ಸದ್ದು
ಬಿಸಿ ಉಸಿರ ಮಾತು
ನೆನಪಾಗಿ ಬರುತಿಹವು
ಕ್ಷಣ ಕ್ಷಣದಿ ಹೊತ್ತು
ಅಲೆ ಬಂದು ಸೆಳೆದಾಯ್ತು
ಬೇರೆಡೆಗೆ ನಿನ್ನ
ನೀ ಮರೆತರೇನಂತೆ?
ನಾ ಮರೆಯೆ ನಿನ್ನ
ಬರಿದಾದ ಮನ ಬೆಳಗೆ,
ನೀನೆಂದು ಬರುವೆ?
ಬರುವವರೆಗೂ ಕಾಯುವುದು
ಈ ಜೀವ ನಿನಗೆ...

   ---ಮಹಾಂತೇಶ ದೊಡ್ಡಮನಿ